Sunday 13 January 2013

Senior Citizens' Forum Mulleria Memorandum-1



ಮಲಯಾಳ ಕಡ್ಡಾಯದ ಭೀತಿ: ಕನ್ನಡ ವಿದ್ಯಾರ್ಥಿಗಳ ಸಾಮೂಹಿಕ ವಲಸೆ
ವಿದ್ಯಾರ್ಥಿಗಳ ಕೊರತೆಯ ನೆಪದಿಂದ ಕನ್ನಡ ಶಾಲೆಗಳನ್ನು ಮುಚ್ಚಬಾರದು: ಮುಖ್ಯಮಂತ್ರಿಗಳಿಗೆ ಒತ್ತಾಯ
ಕಾಸರಗೋಡು: ಕಳೆದ ಸರಕಾರ ಹೊರಡಿಸಿದ ಮಲಯಾಳ ಕಡ್ಡಾಯ ಆದೇಶದಿಂದ ಭಯಭೀತರಾದ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳು ಸಾಮೂಹಿಕವಾಗಿ ಕರ್ನಾಟಕಕ್ಕೆ ವಲಸೆ ಹೋಗುತ್ತಿದ್ದು ಇದನ್ನು ತಡೆಗಟ್ಟಲು  ಈ ಆದೇಶ ಕನ್ನಡ ಶಾಲೆಗಳಿಗೆ ಅನ್ವಯಿಸುವುದಿಲ್ಲವೆಂದು ತಕ್ಷಣವೇ ತಿದ್ದುಪಡಿ ತಂದು ಭಾಷಾ ಅಲ್ಪಸಂಖ್ಯಾತರಲ್ಲಿ ವಿಶ್ವಾಸ ಮೂಡಿಸಬೇಕೆಂದು ಮುಳ್ಳೆರಿಯದ ಹಿರಿಯ ನಾಗರೀಕ ವೇದಿಕೆ ಕೇರಳ ಮುಖ್ಯಮಂತ್ರಿಗಳನ್ನು ಮತ್ತು ವಿದ್ಯಾಭ್ಯಾಸ ಸಚಿವರನ್ನು ಒತ್ತಾಯಿಸಿದೆ.
ಕಳೆದ ಸರಕಾರ ಹುಟ್ಟಿಸಿದ ಈ ಗೊಂದಲವನ್ನು ಈ ಸರಕಾರವೂ ಮುಂದುವರಿಸದೆ ಈ ಆತಂಕವನ್ನು ತಕ್ಷಣ ಕೊನೆಗೊಳಿಸಬೇಕು. ಈ ಆತಂಕಕ್ಕೆ ಸರಕಾರದ ಆದೇಶವೇ  ಕಾರಣವಾದುದರಿಂದ ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯ ನೆವನದಿಂದ ಕನ್ನಡ ಶಾಲೆಗಳ ಯಾವುದೇ ವಿಭಾಗವನ್ನು ರದ್ದುಗೊಳಿಸಬಾರದು ಮತ್ತು ಕನ್ನಡ ಅಧ್ಯಾಪಕ ಹುದ್ದೆಗಳನ್ನು ಕಡಿತ ಗೊಲಿಸಬಾರದು ಎಂದು ವಿನಂತಿಸಿ ಪತ್ರ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಂಗ್ಲಿಷ್ ಶಾಲೆಗಳಿದ್ದು ಇನ್ನಸ್ಟು ಶಾಲೆಗಳಿಗೆ ಅನುಮತಿ ನೀಡಬಾರದು ಎಂದು ಕೇಳಿಕೊಳ್ಳಲಾಗಿದೆ.
ಸಾಮಾನ್ಯವಾಗಿ ಭಾಷಾ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಬೋಟ್ಟುಮಾದಲಾಗುತ್ತದೆ,ಅದರಲ್ಲಿ ಸತ್ಯಾಮ್ಶವೂ ಇದೆ. ಆದರೆ ಮಂಜೇಶ್ವರ ಶೈಕ್ಷಣಿಕ ಉಪಜಿಲ್ಲೆಯ ಬಹುಪಾಲು ಕನ್ನಡ ಶಾಲೆಗಳಲ್ಲಿ ಅಸಾಮಾನ್ಯವಾದ ವಿದ್ಯಾರ್ಥಿ ಸಂಖ್ಯಾ ಕುಸಿತ ಉಂಟಾಗಿದ್ದು ಇದಕ್ಕೆ ಮಲಯಾಳ ಕಡ್ಡಾಯ ಆದೇಶವೇ ಕಾರಣ ಎಂದು ತಿಳಿದುಬಂದಿದೆ.ಮಲಯಾಳ ಕಡ್ಡಾಯವನ್ನು ಸಂಪೂರ್ಣ ಜಾರಿಗೊಳಿಸಿದಲ್ಲಿ ಇಲ್ಲಿ  ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರ ಬದುಕಿಗೆ ಸರಿಪದಿಸಲಾರದ ಹಾನಿ ಸಂಭವಿಸುವುದರಲ್ಲಿ ಸಂಶಯವಿಲ್ಲ. ಈ ಪತ್ರದ ಪ್ರತಿಗಳನ್ನು ಪ್ರಧಾನ ಮಂತ್ರಿಗಳಿಗೆ ಮತ್ತಿ ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತ ಆಯೋಗಕ್ಕೆ ಕೊಡ ಕಳಿಸಲಾಗಿದೆ . 

No comments:

Post a Comment